ಕ್ರಾನ್ಯಸೆವಿಚ್, ಸಿಲ್ವಿಯೆ ಸ್ಟ್ರಾಹಿಮಿರ್
1865-1908 ಯುಗೋಸ್ಲಾವಿಯದ ಕವಿ. ವೃತ್ತಿಯಿಂದ ಉಪಾಧ್ಯಾಯ. ಈತ ನಿಜಕ್ಕೂ ಪ್ರತಿಮಾ ವಿಧಾನವನ್ನನುಸರಿಸಿದ ಮತ್ತು ಅಸಾಧಾರಣವಾದ ತನ್ನತನವನ್ನು ಪಡೆದಿದ್ದ ಶ್ರದ್ಧಾವಂತ ಕವಿ. ತನ್ನ ಯುಗದ ವಾಸ್ತವಿಕ ಬರೆಹಗಾರರಲ್ಲಿ ವ್ಯಕ್ತವಾದ ಬೌದ್ಧಿಕ ಯೋಚನೆಗಳಿಗೂ ತನ್ನ ಮನಸ್ಸನ್ನು ಕದಡುತ್ತಿದ್ದ ಸಮಸ್ಯೆಗಳಿಗೂ ಸಮರ್ಥ ನಿರೂಪಣೆ ಇತ್ತವ. ಗಾಢವಾದ ಚಿಂತನೆ, ಸೂಕ್ಷ್ಮಸಂವೇದನೆ, ದುಃಖ ಮತ್ತು ಅನ್ಯಾಯಗಳಿಗೆ ಸಿಲುಕಿದವರ ವಿಷಯದಲ್ಲಿ ನೈಜವಾದ ಅನುಕಂಪ, ಈತನ ಎಲ್ಲ ಕೃತಿಗಳಲ್ಲಿಯೂ ಕಾಣಬರುತ್ತದೆ.  										(ಎಲ್.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ